Monday, November 30, 2009

ಇದೆಯೆ ನಿನಗೆ ಸಮಯ, ಇದೆಯೆ ನಿನಗೆ ಸಮಯಾ..
ಅಲೆದಾಡಲಿಕೆ, ಜೊತೆ ಹಾಡಲಿಕೆ, ಚ೦ದ್ರನ ನೋಡಲಿಕೆ.. ನಿನಗೆ ಸಮಯಾ,
ಇದೆಯೆ ನಿನಗೆ ಸಮಯಾ..


ಧ್ಯಾನವಾ ಕಲಿತೆನು ದಾರಿಯಾ ಕಾಯುತ, ದಾಹವಾ ಮರೆತೆನು ನಿನ್ನಯಾ ಮೋಹಿತ, ನೀ ಕೇಳಲಾರೆಯಾ..
ನೆನೆದಾಕ್ಷಣವೆ ಕರೆ ಮಾಡಲಿಕೆ.. ಕಾಗದ ಓದಲಿಕೆ... ನಿನಗೆ ಸಮಯಾ
ಇದೆಯೆ ನಿನಗೆ ಸಮಯ, ಇದೆಯೆ ನಿನಗೆ ಸಮಯಾ..

ಗಣಿತವ ಕಲಿತೆನು ನೆನಪನು ಎಣಿಸುತಾ, ಮೈ ಮನ ಅರಿತೆನು ಕನಸನು ಗುಣಿಸುತಾ, ನೀ ಕಾಣಲಾರೆಯ
ತಡ ಮಾಡಿದರೆ ಜಗಳಾಡಲಿಕೆ, ರಾಜಿಯ ಮಾಡಲಿಕೆ... ನಿನಗೆ ಸಮಯಾ
ಇದೆಯೆ ನಿನಗೆ ಸಮಯ, ಇದೆಯೆ ನಿನಗೆ ಸಮಯಾ..
ಅಲೆದಾಡಲಿಕೆ, ಜೊತೆ ಹಾಡಲಿಕೆ, ಚ೦ದ್ರನ ನೋಡಲಿಕೆ ನಿನಗೆ ಸಮಯಾ
ಇದೆಯೆ ನಿನಗೆ ಸಮಯಾ...

1 comment:

  1. ರಾಜೇಶ್ ಸರ್,
    ತುಂಬಾ ಚೆನ್ನಾಗಿದೆ..... ನಾವು ಏನೇ ಮಾಡಿದರೂ , ಅದು ಅವರಿಗಾಗಿಯೇ ಎಂದು ಸೂಚ್ಯವಾಗಿ ಹೇಳಿದ್ದೀರಾ...... ಧನ್ಯವಾದಗಳು......

    ReplyDelete